ಅಂಬಿಕಾದ ವಿದ್ಯಾರ್ಥಿಗಳಿಗೆ ವಿದಾಯ ಕೂಟ ಸಮಾರಂಭ

ಹಣ ಸಂಪಾದನೆ ವಿದ್ಯಾರ್ಜನೆಯ ಧ್ಯೇಯವಲ್ಲ.ವಸುಧೈವ ಕುಟುಂಬಕಂ ಎನ್ನುವ ಭಾವನೆ ಶಿಕ್ಷಣದಿಂದ ಸಿಗಬೇಕು.ಅಪ್ಪ ಅಮ್ಮ ಗುರುಗಳು,ವಿದ್ಯಾಲಯ,ರೈತ,ಇವರ ಋಣ ಸಂದಾಯ ಖಂಡಿತಾ ಸಾಧ್ಯವಿಲ್ಲ.ವಿದ್ಯಾರ್ಥಿಗಳು ನ್ಯಾಯ,ನೀತಿ,ಸತತ ಧರ್ಮ, ದೇಶಕ್ಕಾಗಿ ಬದುಕುವ,ಶಿಕ್ಷಣ ಅಂಬಿಕಾ ವಿದ್ಯಾಲಯದಲ್ಲಿ ಸಿಗುತ್ತದೆ.ಮಾತೃ,ಪಿತೃ,ಅತಿಥಿ, ರಾಷ್ಟ್ರ ದೇವೋಭವ ಎನ್ನುವ ಭಾವನೆಯನ್ನು ದೇಶಕ್ಕೋಸ್ಕರ ಬದುಕುವ ಕಲ್ಪನೆಯನ್ನು ಅಂಬಿಕಾ ವಿದ್ಯಾಲಯವು ವಿದ್ಯಾರ್ಥಿಗಳಿಗೆ ನೀಡಿದೆ.ಈ ಭಾವನೆಗಳನ್ನು ಶಾಶ್ವತವಾಗಿ ನಿಮ್ಮನ್ನು ಉದ್ದೀಪನಗೋಳಿಸಲಿ.ಶಾಂತಿ ಸಹನೆ ತಾಳ್ಮೆ, ದೌರ್ಜನ್ಯ ವಲ್ಲ, ಅದು ನಮ್ಮ ಶಕ್ತಿ ಎಂದು ಯುವ ವಾಗ್ಮಿ ಆದರ್ಶ ಗೋಖಲೆಯವರು ವಿದ್ಯಾರ್ಥಿಗಳ ವಿದಾಯಕೂಟ ಸಮಾರಂಭದಲ್ಲಿ ದೇಶ ಭಕ್ತಿಯನ್ನ ಜಾಗೃತಗೊಳಿಸುವ ಮಾತುಗಳನ್ನಾಡಿದರು. ಪ್ರಕೃತಿಯ ಮಡಿಲಿನ ಮಧ್ಯೆ ಇರುವ ಸುಂದರ ತಾಣವಾದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಶ್ರೀ ಸುಬ್ರಮ್ಮಣ್ಯ ನಟ್ಟೋಜ ಸ್ವಗೃಹದಲ್ಲಿ ಪ್ರೀತಿಯ ವಿದ್ಯಾರ್ಥಿಗಳನ್ನು ಬೀಳ್ಕೋಡುವ ವಿಶೇಷ ಸಮಾರಂಭ ನಡೆಯಿತು.

ದೇಶಕ್ಕಾಗಿ ಜೀವ ಅಲ್ಲ, ಜೀವನ ಕೊಡುವ ನಾಗರಿಕರಾಗಿ, ಒಬ್ಬೋಬ್ಬ ವಿದ್ಯಾರ್ಥಿಗಳು ದೇಶ ಬೆಳಗುವ ಜ್ಯೋತಿಯಾಗಿ ಎಂದು ಸಂಚಾಲಕ ನಟ್ಟೋಜರು ತಮ್ಮ ಪ್ರಿಯ ವಿದ್ಯಾರ್ಥಿಗಳನ್ನು ಹರಸಿದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರವಿಕೃಷ್ಣ ಕಲ್ಲಾಜೆಯವರು ಶುಭ ಹಾರೈಸಿದರು, ನಟ್ಟೋಜ ಶಿವಾನಂದ್ ರಾವ್ ಶ್ರೀಮತಿ ಸುಶೀಲರಾವ್, ಖಜಾಂಜಿ ಹಾಗೂ ಪ್ರಾಂಶುಪಾಲರಾದ ರಾಜಶ್ರೀ ಎಸ್ ನಟ್ಟೋಜ , ಹಿರಿಯ ಉಪನ್ಯಾಸಕ ರಾಮಚಂದ್ರ , ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಶೆಟ್ಟಿ, ಪ್ರಸನ್ನ ಭಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಸತಿಯುತ ಕಾಲೇಜಿನ ಪ್ರಾಂಶುಪಾಲರಾದ ಶಂಕರನಾರಯಣ ಭಟ್, ವಂದನಾರ್ಪಣ ಗೈದರು.ಉಪನ್ಯಾಸಕಿ ಸುಚಿತ್ರ ಪ್ರಭು ನಿರ್ವಹಿಸಿದರು, ನಂತರ ವಿದ್ಯಾರ್ಥಿಗಳು ಯಕ್ಷಗಾನ ತಾಳಮದ್ದಳೆಯಿಂದ ಸಭಿಕರನ್ನು ರಂಜಿಸಿದರು.ಭೋಜನದ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಮರಣಿಕೆ ನೀಡಿದರು.